ಅವಲಂಬನ

ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಆಶಯ ಮತ್ತು ಆಶೀರ್ವಾದದೊಂದಿಗೆ ಹುಟ್ಟಿದ ಹವ್ಯಕ ಸಹಾಯವಾಣಿ "ಅವಲಂಬನ". ಪರಮಪೂಜ್ಯರಿಂದ ಅವಲಂಬನವು ಸೆಪ್ಟೆಂಬರ್ 07 ಭಾನುವಾರ 2008 ರಂದು ಉದ್ಘಾಟಿಸಲ್ಪಟ್ಟಿತು.

ಹವ್ಯಕರ ಸಹಾಯಕ್ಕಾಗಿ ಶ್ರೀಮಠದ ಅಡಿಯಲ್ಲಿ ಅವಲಂಬನ ಕಾರ್ಯನಿರ್ವಹಿಸುತ್ತಿದೆ. ಸಮಾಜದ ಸರ್ವತೋಮುಖ ಅಭಿವೃದ್ದಿಗೆ ಪಣತೊಟ್ಟು ಜೀವನದ ಮೌಲ್ಯಗಳನ್ನು ಜನರಿಗೆ ಮನದಟ್ಟು ಮಾಡುತ್ತಿರುವ ಶ್ರೀಗಳವರ ಹೆಜ್ಜೆಗೆ ಗೆಜ್ಜೆಯಾಗಿ ಹುಟ್ಟಿದ್ದು ಅವಲಂಬನ. ಅವಲಂಬನದ ಹೆಸರಲ್ಲೇ ಅದ್ಬುತವಿದೆ. ಹವ್ಯಕ ಸಹಾಯವಾಣಿಗೆ "ಅವಲಂಬನ" ಅಂತ ಹೆಸರಿಟ್ಟವರು ನಮ್ಮ ಶ್ರೀಗಳವರು.
 
ಅವಲಂಬನ ಸಮಾನ ಮನಸ್ಕ ಯುವ ಮನಸ್ಸುಗಳ ಸಂಘಟನೆಯಾಗಿದ್ದು ಶೀಘ್ರದಲ್ಲೆ ಬೆಳೆದು ಹವ್ಯಕ ಸಮಾಜಕ್ಕೆ ಹಲವಾರು ರೀತಿಯಲ್ಲಿ ಸಹಾಯ ಮಾಡಿದೆ.

ಅವಲಂಬನದ ಸಂಘಟನೆ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಪ್ರಾರಂಭವಾಗಿ ಇದೀಗ ಪ್ರಾಂತ್ಯ ಮಟ್ಟದಲ್ಲಿ ಬೆಳೆಯುತ್ತಿದೆ. ಕೆಲವು ದಿನಗಳ ಹಿಂದೆ ಸಾಗರದಲ್ಲಿ ಅವಲಂಬನದ ಒಂದು ಶಾಖೆಯು ಶೀಗಳವರಿಂದ ಉದ್ಘಾಟನೆಗೊಂಡಿತು.

ಹೆಸರಲ್ಲೇ ಇರುವಂತೆ ಅವಲಂಬನದಲ್ಲಿ ಐದು ಪ್ರಮುಖ ವಿಭಾಗಗಳಿವೆ.

  1. ೧) ಅಕ್ಷರ - ಆಸಕ್ತ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ, ಪ್ರತಿಭಾವಂತ ಅಶಕ್ತ ವಿದ್ಯಾರ್ಥಿಗಳಿಗೆ ನೆರವು  
  2. ೨) ವಸತಿ - ವಿದ್ಯಾರ್ಜನೆ ಮತ್ತು ಉದ್ಯೋಗವನ್ನರಸಿ ಪಟ್ಟಣಗಳಿಗೆ ಬರುವ ಸಮಾಜದ ಬಂಧುಗಳಿಗೆ ವಾಸ್ತವ್ಯ ಮತ್ತು ವ್ಯವಸ್ಥೆಯ ಮಾಹಿತಿ  
  3. ೩) ಲಗ್ನ - ವಿವಾಹಾಪೇಕ್ಷಿತ ಹವ್ಯಕ ಬಂಧುಗಳ ಮಾಹಿತಿ ಸಂಗ್ರಹ ಮತ್ತು ನೆರವು  
  4. ೪) ಬದುಕು - ಉದ್ಯೋಗಾಕಾಂಕ್ಷಿಗಳಿಗೆ ಮಾರ್ಗದರ್ಶನ ಮತ್ತು ಸಹಾಯ  
  5. ೫) ನಲಿವು - ಆರೋಗ್ಯ ಸಮಸ್ಯೆಗಳಿರುವ ವ್ಯಕ್ತಿಗಳಿಗೆ ನೆರವು, ರಕ್ತದಾನಿಗಳ ಮಾಹಿತಿ ಸಂಗ್ರಹ