ಪ್ರಕಟಣೆ

ಪ್ರಿಯರೇ,

’ಅವಲಂಬನ’ 10ನೇ ತರಗತಿಯ ಮಕ್ಕಳು ಹಾಗೂ ಅವರ ತಾಯ್ತಂದೆಯರಿಗೆ ಬದಲಾಗುತ್ತಿರುವ ಜಗತ್ತಿನೊಂದಿಗೆ ತೆರೆದುಕೊಳ್ಳುತ್ತಿರುವ ಹೊಸ ಉದ್ಯೋಗ ಅವಕಾಶಗಳನ್ನು ಪರಿಚಯಿಸುವ ದೃಷ್ಟಿಯಿಂದ ’ಭವಿಷ್ಯ’ ಎಂಬ ಮಾಹಿತಿ ಕಾರ್ಯಾಗಾರವೊಂದನ್ನು ಹಮ್ಮಿಕೊಂಡಿದೆ.

'ಭವಿಷ್ಯ’, ನಮ್ಮ ಸಮಾಜದಿಂದ ಅದೇಕೊ ಕೊಂಚ ದೂರವೇ ಉಳಿದಂತಿರುವ ಐ.ಎ.ಎಸ್, ಐ.ಪಿ.ಎಸ್ ಇತ್ಯಾದಿ ಆಡಳಿತಾತ್ಮಕ ಸೇವೆಗಳಲ್ಲಿ ಇರುವ ಸಮೃದ್ಧ ಉದ್ಯೋಗಾವಕಾಶಗಳು, ವಾಣಿಜ್ಯ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ತೆರೆದುಕೊಳ್ಳುತ್ತಿರುವ ಹೊಸ ಹೊಸ ಉದ್ಯೋಗಗಳು ಅಂತೆಯೆ ವಿಜ್ಞಾನ, ಸಂಶೋಧನಾ ಕ್ಶೇತ್ರಗಳಲ್ಲಿ ಇರುವ ವಿಪುಲ ಜೀವನಪಥಗಳ ಕುರಿತಾದ ಮಾಹಿತಿಗಳನ್ನು ಆಯಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರಿಂದಲೆ ಕೊಡಿಸುವ ಒಂದು ವಿಶಿಷ್ಟ ಕಾರ್ಯಕ್ರಮ.

ವಿದ್ಯಾರ್ಥಿಗಳು ಯಾರದ್ದೊ ಒತ್ತಡಕ್ಕೋ, ಅಥವಾ ಇನ್ಯಾವುದೊ ತಪ್ಪು ಮಾಹಿತಿಗಳಿಂದ ಪ್ರೇರಿತರಾಗಿಯೊ ತಮ್ಮ ಬದುಕಿನ ದಾರಿಗಳನ್ನು ಕಂಡುಕೊಳ್ಳುವ ಬದಲು, ತಮ್ಮ ಆಸಕ್ತಿಯ ಕ್ಷೇತ್ರದಲ್ಲೆ ತಮ್ಮ ಜೀವನೋಪಾಯದ ಮಾರ್ಗವನ್ನು ಕಂಡುಕೊಳ್ಳುವುದೇ ಯಶಸ್ಸಿಗೆ ಪ್ರೇರಕ ಎಂಬುದನ್ನು ’ಭವಿಷ್ಯ’ ಬಿಂಬಿಸಲೆತ್ನಿಸಲಿದೆ. ಮಕ್ಕಳ ಮಾನಸಿಕ ಸಾಮರ್ಥ್ಯ ಹಾಗೂ ಅದರ ಒಲವು ನಿಲುವುಗಳನ್ನು ಅಳೆದು ಅದರ ಆಧಾರದ ಮೇಲೆ ಅವರವರ ಸಾಮರ್ಥ್ಯಕ್ಕನುಗುಣವಾದ ಕ್ಷೇತ್ರವನ್ನು ಗುರುತಿಸುವುದಕ್ಕೆ ಹಿನ್ನೆಲೆಯಾಗಿ ಮನೋವೈಜ್ನಾನಿಕ ಪರಿಕ್ಷೆಯೊಂದನ್ನೂ ಕೂಡ ಕಾರ್ಯಾಗಾರ ಒಳಗೊಂಡಿದೆ.ಇದರೊಂದಿಗೆ ಸಂಗೀತ, ಚಿತ್ರಕಲೆ, ಸಾಹಿತ್ಯ, ಕ್ರೀಡೆ ಹಾಗೂ ರಂಗಕಲೆಗಳಲ್ಲಿ ತಮ್ಮ ವೃತ್ತಿ-ಪ್ರವೃತ್ತಿಯನ್ನು ಕಂಡುಕೊಂಡ ಸಾಧಕರ ಪರಿಚಯದೊಂದಿಗೆ ಅಲ್ಲಿರುವ ಉಜ್ವಲ ಅವಕಾಶಗಳ ಬಗೆಗೆ ’ಭವಿಷ್ಯ’ ಬೆಳಕು ಚೆಲ್ಲಲಿದೆ.ನಮ್ಮ ನಮ್ಮ ಪುಟ್ಟ ಊರುಗಳಲ್ಲಿ 10ನೇ ತರಗತಿಯಲ್ಲಿ ಒದುತ್ತಿರುವ ಕೂಸು,ಮಾಣಿಗಳು ಬದುಕಿನ ಭದ್ರೆನೆಲೆಗಳನ್ನು ಕಾಣುವಲ್ಲಿ, ನಾವು ಕಂಡುಕೊಂಡ ಕಾಣುತ್ತಿರುವ ನವ ನವೋನ್ಮೇಶಶಾಲಿಯಾದ ಜಗದ ಹೊಸ ಪರಿಭಾಷೆಯನ್ನು, ಪ್ರೀತಿಯಿಂದ ತಿಳಿಸುವ ಹೊಣೆ ನಮ್ಮನಿಮ್ಮೆಲ್ಲರದು. ಈ ಹಿನ್ನೆಲೆಯಲ್ಲಿ ನಿಮ್ಮ ನಜರಿನಲ್ಲಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ, ಅವರ ಪಾಲಕರಿಗೆ ವಿಷಯ ತಿಳಿಸಿ ಅವರು ಮುದ್ದಾಂ ಬರುವಂತೆ ಮಾಡುವುದು ನಿಮ್ಮದೇ ಹೊಣೆಯೆಂದು ಪ್ರೀತಿಯಿಂದ ನೆನಪಿಸುತ್ತಾ,

ವಿವರಗಳು:ಏನು?: 'ಭವಿಷ್ಯ' (’ಹತ್ತರ ನಂತರ ಮುಂದೇನು’) ಕಾರ್ಯಾಗಾರ
ಯಾರಿಗೆ?: ಒಂಬತ್ತು ಹತ್ತನೇ ತರಗತಿಯ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ,ಅವರ ತಾಯ್ತಂದೆಯರಿಗೆ.
ಯಾವಾಗ: ೨೨ ಮೇ ೨೦೧೧ ಭಾನುವಾರ 09:30 ಘಂಟೆಗೆ
ಎಲ್ಲಿ: ಶ್ರೀಭಾರತೀ ವಿದ್ಯಾಸಂಸ್ಥೆಗಳು, ಮುಜುಂಗಾವು


ಪ್ರೀತಿಯಿಂದ,
ಅಕ್ಷರ ವಿಭಾಗ,
ಅವಲಂಬನ

ಸಮಯ

ವಿಷಯ

ಉಪನ್ಯಾಸಕರು

ಬೆಳಗ್ಗೆ: 10:00 - 11.30

ವಿದ್ಯಾರ್ಥಿಗಳನೈಜಆಸಕ್ತಿಅರಿಯಲುಮನೋವೈಜ್ನಾನಿಕಪರೀಕ್ಷೆ ಮತ್ತುಅದರವಿಶ್ಲೇಷಣ

ವಿಶ್ವೇಶ್ವರ ಭಟ್, ಉಂಡೇಮನೆ

ಬೆಳಗ್ಗೆ :11.30 - 12.15

ಮಹತ್ಸಾಧನೆಗೆ ಬೇಕಾದ ಮಾನಸಿಕ ಮತ್ತು ದೈಹಿಕ ಸಿದ್ಧತೆಗಳು(ಏಕಾಗ್ರತೆ, ಆಸಕ್ತಿ ವೃದ್ದಿ ಇತ್ಯಾದಿ

ವಿಶ್ವೇಶ್ವರ ಭಟ್, ಉಂಡೇಮನೆ

ಬೆಳಗ್ಗೆ 12:15 - 01.0

ಕೃಷಿ ಗೃಹೋದ್ಯಮ ಇತ್ಯಾದಿ

ಚಂದ್ರಶೇಖರ ಏತಡ್ಕ 

 

 

 

ಮಧ್ಯಾಹ್ನ 01: 45 - 02.30:

ಎಂಜಿನೀರಿಂಗ್ ವಿಭಾಗದಲ್ಲಿನ ಅವಕಾಶಗಳು ಮತ್ತು ಅದರ ತಯಾರಿ (ಲಾಜಿಕಲ್ ರೀಸನಿಂಗ್ ಇತ್ಯಾದಿ)

ಡಾ.ಯು.ಬಿ. ಪವನ

ಮಧ್ಯಾಹ್ನ 02.30- 03.15

ಆಡಳಿತಾತ್ಮಕ ಸೇವೆಗಳು (ಐ.ಪಿ.ಎಸ್, ಐ, ಏ, ಎಸ್  ಇತ್ಯಾದಿ

ಶ್ರೀಪ್ರಕಾಶ್ ಕುಕ್ಕಿ

ಮಧ್ಯಾಹ್ನ ೦3.30  - 04:00

ಮೂಲಭೂತ ವಿಜ್ನಾನ ಕ್ಷೇತ್ರದಲ್ಲಿನ ಉದ್ಯೋಗಾವಕಾಶಗಳು ಮತ್ತು ವಿದ್ಯಾರ್ಥಿಗಳಿಗೆ ದೊರೆಯುವ ವಿವಿಧ ವಿದ್ಯಾರ್ಥಿವೇತನಗಳು

ಶ್ರೀಪ್ರಕಾಶ್ ಕುಕ್ಕಿಲ/ಅಶೋಕ್ ಭಟ್

ಮಧ್ಯಾಹ್ನ 04:00 - 04.45

ಸಂಗೀತ/ಲಲಿತಕಲೆ/ಪತ್ರಿಕೋದ್ಯಮ ಅವಕಾಶಗಳ ಗಣಿ

ಶ್ರೀನಿಧಿ ಡಿ.ಎಸ್

ಹೆಚ್ಚಿನ ಮಾಹಿತಿಗೆ 98442 20393/ 95919 94644 ಅವರನ್ನು ಸಂಪರ್ಕಿಸಿ.