ಬದುಕು ವಿಭಾಗ

ನಾಗಾಲೋಟದಿಂದ ಓಡುತ್ತಿರುವ ಈ ಜಗತ್ತಿನಲ್ಲಿ ಪ್ರತಿಯೊಂದಕ್ಕೂ ಬಹಳ ಸ್ಪರ್ದೆಯಿರುವುದನ್ನು ನಾವಿಂದು ನೋಡುತ್ತಿದ್ದೇವೆ. ಅಂತಹ ಸ್ಪರ್ದೆಯನ್ನ್ನು ಸಮರ್ಥವಾಗಿ ಎದುರಿಸಲು ಹಳ್ಳಿಗಳಿಂದ ಬರುವವರಿಗೆ ಸರಿಯಾದ ಮಾರ್ಗದರ್ಶನ ಬೇಕಾಗಿದೆ. ಇದರ ಜವಾಬ್ದಾರಿಯನ್ನು ಹೊತ್ತಿದೆ “ಬದುಕು ವಿಭಾಗ.

ಈ ಆಧುನಿಕ ಜಗತ್ತಿನಲ್ಲಿ ಪ್ರತಿ ಕ್ಷಣ ಹೊಸತು ಹೊಸತು ಅನ್ವೇಷಣೆಯಾಗುತ್ತಿದೆ. ಅದಕ್ಕೆ ಸರಿಯಾಗಿ ನಾವಿಂದು ಸಿದ್ದರಾಗಬೇಕಾಗಿದೆ. ಅಂತಹ ವಿಷಯಗಳಲ್ಲಿ ಪರಿಣಿತಿ ಹೊಂದಿರುವವರು ನಮ್ಮ ಬಹಳಷ್ಟು ಜನರಿದ್ದಾರೆ. ಅನೇಕರಿಗೆ ಸಹಾಯ ಮಾಡುವ ಮನೋಭಾವವಿರುತ್ತದೆ. ಆದರೆ ಅವರ ಮತ್ತು ಹಳ್ಳಿಗಳಿಂದ ಬರುವವರಿಗೆ ಯಾವುದೇ  ರೀತಿಯ ಸಂಪರ್ಕವಿರುವುದಿಲ್ಲ. ಇವರಿಬ್ಬರಿಗೆ ಕೊಂಡಿಯಾಗಿ ಬದುಕು ವಿಭಾಗ ಕೆಲಸ ಮಾಡುತ್ತಿದೆ.

ಈಗಾಗಲೇ ಬದುಕು ವಿಭಾಗ ಬೆಂಗಳೂರಿನಲ್ಲಿ ಇರುವ ೫೦ಕ್ಕೂ ಹೆಚ್ಚು ಹವ್ಯಕ HR ಗಳ ತಂಡ ರಚಿಸಿದ್ದು ಉದ್ಯೋಗಾಂಕ್ಷಿಗಳಿಗೆ ಬಹಳ ಸಹಾಯವಾಗುತ್ತಿದ್ದಾರೆ. ಉತ್ತಮ ಹುದ್ದೆಯಲ್ಲಿ ಇರುವವರ ಪಟ್ಟಿ ಸಿದ್ದವಾಗುತ್ತಿದ್ದು ಅದು ಇನ್ನೂ ಸಹಾಯವಾಗಲಿದೆ.