ಲಗ್ನ ವಿಭಾಗ

ಅವಲಂಬನದ ಲಗ್ನ ವಿಭಾಗವು ವೈವಾಹಿಕ ಕ್ಷೇತ್ರದಲ್ಲಿ ಹವ್ಯಕರ ಒಂದು 'ಸಹಾಯವಾಣಿ'ಯಾಗಿ ಸಮಾಜವನ್ನು ಸ್ಪಂದಿಸುವ ಗುರಿ ಹೊಂದಿದೆ.
 
ಪ್ರಸ್ತುತ ವೈವಾಹಿಕ ವಿಷಯಗಳಲ್ಲಿ ಹವ್ಯಕ ಸಮಾಜವು ಬಹುತರವಾದ ತೀವ್ರ ಸಮಸ್ಯೆಗಳನ್ನು ಎದುರಿಸುತ್ತಿದೆ. ಉದಾಹರಣೆಗೆ, ಹಳ್ಳಿಯಲ್ಲಿರುವ ಹಾಗು ವೈದಿಕರ/ಕೃಷಿಕರ/ಸ್ವ-ಉದ್ಯೋಗ ಹೊಂದಿರುವ ವಿವಾಹಪೇಕ್ಷಿತ ಪುರುಷರಿಗೆ ಹೆಣ್ಣುಗಳ ಕೊರತೆ, ಹೆಚ್ಚುತ್ತಿರುವ ಅಂತರ್ಜಾತೀಯ ವಿವಾಹಳ ಸಂಖ್ಯೆ; ಇದರಿಂದ ಸಮಾಜದಲ್ಲಿ ಉಂಟಾಗುತ್ತಿರುವ ವರ್ಣಸಂಕರ, ವಿವಾಹಿತರಿಗೆ ವಿವಾಹದ ಹಾಗು ವೈವಾಹಿಕ ಜೀವನದ ಮಹತ್ವದ ಅರಿವಿನ ಕೊರತೆ ಹಾಗು ಅದರಿಂದ ಹೆಚ್ಚುತ್ತಿರುವ ವಿವಾಹ ವಿಚ್ಛೇದನಗಳ ಸಂಖ್ಯೆ, ನಮ್ಮ ಆರ್ಷ ವಿವಾಹ ಪದ್ಧತಿಯ ಒಂದು ಮುಖ್ಯ ಭಾಗವಾಗಿದ್ದ ಜಾತಕ-ಹೊಂದಾಣಿಕೆಯ ಪ್ರಕ್ರಿಯೆಯಲ್ಲಿ ನಂಬಿಕೆಯ ಕುಸಿತ ಇತ್ಯಾದಿ. ಈ ಮೇಲೆ ತಿಳಿಸಿದವೆಲ್ಲವೂ ಸಮಸ್ಯೆಗಳಾವುದಕ್ಕೂ ಸುಲಭ ಪರಿಹಾರಗಳಿಲ್ಲ. ಆದರೆ ಈ ಜ್ವಲಂತ ಸಮಸ್ಯೆಗಳ ತೀವ್ರತೆಯನ್ನು ಕಿಂಚಿತ್ತಾದರೂ ಕಡಿಮೆಗೊಳಿಸಲು ಅವಲಂಬನ ತಂಡವು ಕಾರ್ಯಪ್ರವೃತ್ತವಾಗಿದೆ.
 
ಅವಲಂಬನದ 'ಲಗ್ನ' ತಂಡದ ಸದ್ಯದ ಕಾರ್ಯವಿಸ್ತಾರವು ಈ ಮೂರು:
1. ಮಾಹಿತಿ ಸಂಗ್ರಹ ಹಾಗು ವಿವಾಹ ಹೊಂದಾಣಿಕೆ: ಈ ಕಾರ್ಯಕ್ರಮದ ಗುರಿ ಹವ್ಯಕ ಸಮಾಜದ ವಿವಾಹಪೇಕ್ಷಿತ ಗಂಡು/ಹೆಣ್ಣುಗಳ ಮಾಹಿತಿ ಸಂಗ್ರಹ ಹಾಗು ತನ್ಮೂಲಕ ಸಾಮ್ಯತೆಯುಳ್ಳ ಗಂಡು-ಹೆಣ್ಣುಗಳ ಕುಟುಂಬಗಳನ್ನು ಮಾತುಕತೆಗೆ ಹತ್ತಿರ ತರಲು ಸಹಕರಿಸುವುದು.
 
2. ಸಮಾಜ ಜಾಗ್ರತಿ: ನಮ್ಮ ಹವ್ಯಕ ಸಮಾಜವು ಪ್ರಸ್ತುತ ಎದುರಿಸುತ್ತಿರುವ ವೈವಾಹಿಕ ಸಂಬಂಧೀ ಸಮಸ್ಯೆಗಳಿಗೆ ಜನರಲ್ಲಿ ಜಾಗ್ರತಿ ಮೂಡಿಸುವ ಮೂಲಕ ಸಮಾಜ ಸುಧಾರಣೆಯ ಯತ್ನ, ಈ ಕಾರ್ಯಕ್ರಮ. ಅಂತರ್ಜಾತೀಯ ವಿವಾಹಗಳ ದುಷ್ಪರಿಣಾಮಗಳು, ವಿವಾಹ ವಿಚ್ಛೇದನದ ದುಷ್ಪರಿಣಾಮಗಳು, ಆದರ್ಶ ವೈವಾಹಿಕ ಜೀವನ ನಡೆಸುವ ಬಗೆ ಇತ್ಯಾದಿ ವಿಷಯಗಳ ಮೇಲೆ ಜನರಿಗೆ ಸಮಾಜದ ಹಿರಿಯರಿಂದ, ಜ್ನಾನ-ವಿಜ್ನಾನ ತೃಪ್ತಾತ್ಮರಿಂದ ಮಾಹಿತಿ ಒದಗಿಸುವುದು ಈ ಕಾರ್ಯಕ್ರಮದ ಗುರಿ.
 
3. ವಿವಾಹ ಸಹಾಯ: ವಿವಾಹದ ಸಂದರ್ಭದಲ್ಲಿ ಗಂಡು-ಹೆಣ್ಣಿನ ಕುಟುಂಬದವರಿಗೆ ಮಾಹಿತಿ, ಆರ್ಥಿಕ ಸಹಾಯ, ಸಾಮೂಹಿಕ ವಿವಾಹಗಳ ಆಯೋಜನೆ ಹಾಗು ಇನ್ನಿತರ ರೀತಿಗಳಲ್ಲಿ ಯಥಾಸಾಧ್ಯ ಸಹಾಯ ಮಾಡುವ ಗುರಿ ಇದೆ.
 
ಲಗ್ನ ತಂಡ ನಿಮ್ಮೆಲ್ಲರ ಸಲಹೆ, ಸೂಚನೆ ಹಾಗು ಸಹಕಾರಗಳನ್ನು ಸದಾ ಸ್ವಾಗತಿಸುತ್ತದೆ. ನಿಮಗೆ ಏನಾದರೂ ಸಲಹೆ ಕೊಡುವುದಿದ್ದಲ್ಲಿ ಅಧವಾ ನಮ್ಮ ತಂಡವನ್ನು ಸೇರಿ ಸಮಾಜ ಸೇವೆಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುವ ಇಚ್ಛೆಯಿದ್ದಲ್ಲಿ sevashakhe@gmail.com ಗೆ ಈ-ಮೈಲ್ ಮಾಡಿ.

ಹವ್ಯಕರ ಇತಿಹಾಸದ ಮೇಲೆಯೂ ಬೆಳಕು ಚೆಲ್ಲುವ ಕೆಲಸ ಪ್ರಾರಂಭವಾಗಿದೆ. ಮುಂದಿನ ದಿನಗಳಲ್ಲಿ “havyaka matrimony” ಅಂತರಜಾಲ ತಾಣ ಲಗ್ನ ವಿಭಾಗದಿಂದ ನಡೆಯಲಿದೆ.