ನಲಿವು ವಿಭಾಗ

ಜೀವನದಲ್ಲಿ ಏನ್ನನ್ನೇ ಸಾಧಿಸಲು ಉತ್ತಮ ಆರೋಗ್ಯವಿರಬೇಕು. ಮನುಷ್ಯನ ಮನಸ್ಸು ಸದಾ ಉಲ್ಲಾಸದಿಂದರಬೇಕು. ಜೀವನದ ಗುರಿಯತ್ತ ಸಾಗಲು ಇದು ಬಹಳ ಸಹಾಯಕಾರಿ. ದಿನಕಳೆದಂತೆ ಮನುಷ್ಯರಲ್ಲಿ ನಿಮ್ಮದಿ ದೂರವಾಗುತ್ತಿದೆ. ಜೀವನದ ಮೌಲ್ಯಗಳೇನು, ಗುರಿಗಳೇನು ಎನ್ನುವುದು ಎಲ್ಲರಿಂದ ದೂರವಾಗುತ್ತಿದೆ. ಕೆಲವೇ ಕೆಲವರು ಮಾತ್ರ ಜೀವನದಲ್ಲಿ ಯಶಸ್ವಿಗಳಾಗುತ್ತಿದ್ದಾರೆ. ಉಳಿದವರು ಸದಾ ಅಶಾಂತಿ ಮತ್ತು ಉದ್ವೇಗದಲ್ಲಿರುತ್ತಿದ್ದಾರೆ. ಅಂತವರಿಗೆ ಸರಿಯಾದ ಮಾರ್ಗದರ್ಶದ ಅವಶ್ಯಕತೆಯಿದೆ.

ಜನಸಂಖ್ಯೆ ಜಾಸ್ತಿಯಾದಂತೆ ಪ್ರತಿದಿನ ಚಿತ್ರವಿಚಿತ್ರ ಕಾಯಿಲೆ ಪ್ರಾರಂಭವಾಗಿದ್ದು ವೈಧ್ಯಕೀಯ ಸೌಲಭವೆನ್ನುವುದು ಬಡವರಿಗೆ ಮರೀಚಿಕೆಯಾಗಿದೆ. ಸರಿಯಾದ ವೈಧ್ಯಕೀಯ ಸೌಲಭ್ಯವಿಲ್ಲದೇ ಅದೆಷ್ಟೋ ಜನರು ನರಳುತ್ತಿದ್ದಾರೆ.

ಇವೆಲ್ಲದರ ಜವಾಬ್ದಾರಿಯನ್ನು ಹೊತ್ತಿದೆ “ನಲಿವು” ವಿಭಾಗ.  ನಲಿವು ವಿಭಾಗ ಬೆಂಗಳೂರಿನಲ್ಲಿ ಇರುವ ವೈದರ ತಂಡ ರಚಿಸಿದ್ದು, ಅನೇಕ ಬಡವರಿಗೆ ಈ ವೈದ್ಯರ ಮೂಲಕ ಉತ್ತಮ ಚಿಕಿತ್ಸೆಯನ್ನು ಕಡಿಮೆ ವೆಚ್ಚದಲ್ಲಿ ನೀಡಲು ಸಹಕಾರಿಯಾಗಿದೆಂದು ಹೇಳಲು ಹೆಮ್ಮೆಯಾಗುತ್ತದೆ. ಹವ್ಯಕ ಯುವ ಮನಸ್ಸುಗಳು ತಂಡ ರಚಿಸಿಕೊಂಡು ಉಚಿತವಾಗಿ ರಕ್ತದಾನವನ್ನು ಮಾಡುತ್ತಿದ್ದಾರೆ.