ವಾರ್ತೆ
ವಾರ್ತೆಯ ಮುಖಪುಟ
ಜುಲೈ 02, 2009
 

ಅವಲಂಬನ ತಂಡದ ವಿಶಿಷ್ಟ ಹಾಗೂ ಮಹತ್ವಾಕಾಂಕ್ಷಿ ಯೋಜನೆ ತಿಂಗಳ ಬೆಳಕು’ ತಾರಿಖು 02-07-2009 ಗುರುವಾರದಂದು ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳಿಂದ ಸಾಗರ ಸಮೀಪದ ವರದಾಮೂಲದಲ್ಲಿ ಉದ್ಘಾಟಿಸಲ್ಪಟ್ಟಿತು.


ಕಾರ್ಯಕ್ರಮ ಚಿತ್ರಗಳು
   


ಶ್ರೀಗಳು ಕಾರ್ಯಕ್ರಮವನ್ನು ದೀಪ ಬೆಳಗಿಸುವುದರೊಂದಿಗೆ ಉಧ್ಘಾಟಿಸಿ ’ತಿಂಗಳ ಬೆಳಕು’ ಕಾರ್ಯಕ್ರಮಕ್ಕಾಗಿ ’ಭರತನ ಸಂದೇಶ’ ಎಂಬ ವಿಶೇಷ ಪ್ರವಚನವನ್ನು ಕೂಡ ಅನುಗ್ರಹಿಸಿದರು. ಅವಲಂಬನ ತಂಡ ಉತ್ತಮವಾಗಿಕೆಲಸಮಾಡುತ್ತಿದೆ ಎಂದ ಶ್ರೀಗಳು ಕಾರ್ಯಕರ್ತರು ಭರತನ ಹಾಗೆ ನಿಸ್ಪೃಹರಾಗಿ ಕೆಲಸಮಾಡಬೇಕೆಂದು ಸೂಚಿಸಿದರು.

ಮಧು ದೊಡ್ಡೇರಿ ಅವಲಂಬನದ ಉದ್ದೇಶ, ಸಾಧನೆಗಳನ್ನು ಕುರಿತಾಗಿ ವಿವರಿಸಿದರೆ, ಶ್ರೀನಂದನ್ ರಾವ್, ಕುಗ್ವೆ ’ತಿಂಗಳ ಬೆಳಕು’ ಕಾರ್ಯಕ್ರಮದ ಸ್ವರೂಪವನ್ನು ಸಭೆಗೆ ತಿಳಿಯಪಡಿಸಿದರು.

೩೦೦ಕ್ಕೂ ಹೆಚ್ಚು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸುಮಾ ನಡಹಳ್ಳಿ, ಮಧು ದೊಡ್ಡೇರಿ ಬೆಂಗಳೂರು ಅವಲಂಬನ ತಂಡವನ್ನು ಪ್ರತಿನಿಧಿಸಿದ್ದರು. ಇಕ್ಕೇರಿ ಸೀಮ ಪರಿಷತ್‍ನ ಸಹಕಾರದೊಂದಿಗೆ ಕಾರ್ಯಕ್ರಮ ಆಯೋಜಿಸಲ್ಪಟ್ಟಿತ್ತು.