ವಾರ್ತೆ
ವಾರ್ತೆಯ ಮುಖಪುಟ
11 ಏಪ್ರಿಲ್, 2009

ಅವಲಂಬನದ ನಲಿವು ವಿಭಾಗವು ರಾಷ್ಟ್ರೋತ್ಥಾನ ಪರಿಷತ್ ಸಹಭಾಗಿತ್ವದಲ್ಲಿ ನಡೆಸಿದ ರಕ್ತದಾನ ಶಿಬಿರದ ವಿವರ

ಅವಲಂಬನದ ನಲಿವು ವಿಭಾಗ ದಿನಾಂಕ 11/04/09 ರಂದು ನಡೆಸಿದ ರಕ್ತದಾನ ಶಿಬಿರ ಬಹಳ ಯಶಸ್ವಿಯಾಗಿ ನಡೆಯಿತು. ರಾಷ್ಟ್ರೋತ್ಥಾನ ಪರಿಷತ್ತಿನ ಸಹಭಾಗಿತ್ವದಲ್ಲಿ ನಡೆದ ಶಿಬಿರದ ಉದ್ಘಾಟನೆಯನ್ನು ಪರಮಪೂಜ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿಗಳು ಶ್ರೀರಾಮಾಶ್ರಮದಲ್ಲಿ ನೆರವೇರಿಸುವುದರೊಂದಿಗೆ ಅವಲಂಬನ ತನ್ನ ಮತ್ತೊಂದು ಹೆಜ್ಜೆಯನ್ನು ದೃಡವಾಗಿ ಇರಿಸುವಂತಾಯಿತು.


ಕಾರ್ಯಕ್ರಮ ಚಿತ್ರಗಳು
   

ಹವ್ಯಕ ಸಹಾಯವಾಣಿ ಅವಲಂಬನ, ಆಗಾಗ್ಗೆ ನಮ್ಮ ಸಮಾಜ ಭಾಂಧವರಿಂದ ರಕ್ತದ ಅವಶ್ಯಕತೆಉಅ ಕುರಿತಾದ ಬೇಡಿಕೆಗಳನ್ನು ಎದುರಿಸುತ್ತಿದ್ದು, ಅವಲಂಬನದ ಹೆಚ್ಚಿನ ಕಾರ್ಯಕರ್ತರು ಉದ್ಯೋಗದ ಹಿನ್ನಲೆಯಲ್ಲಿ ಸೂಕ್ತ ಸಮಯಕ್ಕೆ ಈ ಬೇಡ್ಕೆಗಳನ್ನು ಪೂರೈಸುವುದು ಒಂದು ಸವಾಲಾಗಿ ಪರಿಣಮಿಸಿತ್ತು. ಈ ಹಿನ್ನಲೆಯಲ್ಲಿ ಅವಲಂಬನದ “ನಲಿವು” ವಿಭಾಗವು ರಾಷ್ಟ್ರೋತ್ಥಾನ ಪರಿಷತ್ ಸಂಪರ್ಕಿಸಿ ರಕ್ತದ ಅವಶ್ಯಕತೆಗಳಿಗೆ ಪರಸ್ಪರ ಸಹಕಾರಕ್ಕೆ ಒಪ್ಪಂದ ಮಾಡಿಕೊಂಡಿದೆ. ಅದರ ಮೊದಲ ಹೆಜ್ಜೆಯೇ ಈ ರಕ್ತದಾನ ಶಿಬಿರ.

ಹವ್ಯಕ ಸಮಾಜಭಾಂದವರಿಗಾಗಿ ಏರ್ಪಡಿಸಿದ್ದ ಈ ಶಿಬಿರವನ್ನು ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ದೀಪ ಬೆಳಗುವದರೊಂದಿಗೆ ಉದ್ಘಾಟಿಸಿದರು. ರಾಷ್ಟ್ರೊತ್ಥಾನ ಪರಿಷತ್ ನಿಂದ ಆಗಮಿಸಿದ್ದ ರಕ್ತನಿಧಿ ಸಂಚಾಲಕ ಶ್ರೀ. ನರಸಿಂಹ ಶಾಸ್ತ್ರಿಗಳು ಮಾತನಾಡಿ ರಕ್ತದಾನದ ಮಹತ್ವವನ್ನು ವಿವರಿಸಿದರು. ರಾಷ್ಟ್ರೊತ್ಥಾನ ಪರಿಷತ್ ಅವಲಂಬನದಿಂದ ಬರಬಹುದಾದ ರಕ್ತದ ಅವಶ್ಯಕತೆಯನ್ನು ಸಾದ್ಯವಾದ ಮಟ್ಟಿಗೆ ಪೂರೈಸುವುದಾಗಿ, ಹಾಗೆಯೇ ಅವಲಂಬನದ ಯಾವುದೇ ಸಮಾಜಮುಖಿ ಕೆಲಸಗಳಿಗೆ ರಾಷ್ಟ್ರೊತ್ಥಾನ ಪರಿಷತ್ ಸಹಕಾರವಿದೆಯೆಂದು ತಿಳಿಸಿದರು. ನಂತರ ಮಾತನಾಡಿದ ಬೆಂಗಳೂರು ಸೀಮಾಪರಿಷತ್ತಿನ ಕಾರ್ಯದರ್ಶಿ ಶ್ರೀ. ಸಿ.ಹೆಚ್.ಎಸ್ ಭಟ್ಟರು, ಇನ್ನೊಬ್ಬ ಮುಖ್ಯ ಅತಿಥಿ ಶ್ರೀಯುತ ಕೃಷ್ಣ ಭಟ್ (ಡಿ.ಸಿ.ಪಿ) ಅವರನ್ನು ಸಭೆಗೆ ಪರಿಚಯಿಸುವುದರೊಂದಿಗೆ, ಇಂದಿನ ದಿನಗಳಲ್ಲಿ ಸಮಯದಾನ ಅತ್ಯಮೂಲ್ಯವೆನಿಸುತ್ತಿದೆ. ತಮ್ಮ ಬಿಡುವಿನ ವೇಳೆಯಲ್ಲಿ ಸಮಾಜಕ್ಕಾಗಿ ಸಮಯವನ್ನು ನೀಡುತ್ತಿರುವ ಅವಲಂಬನ ಕಾರ್ಯಕರ್ತರ ಶ್ರಮವನ್ನು ಮುಕ್ತ ಕಂಠದಿಂದ ಹೊಗಳಿದರು. ಬೆಂಗಳೂರು ಸೀಮಾಪರಿಷತ್ತಿನ ಅಧ್ಯಕ್ಷ ಶ್ರೀ. ಎಮ್.ಎನ್.ಭಟ್ ಮದ್ಗುಣಿಯವರು, ಅವಲಂಬನ ಕಾರ್ಯಕರ್ತರ ಶ್ರಮವನ್ನು ಪ್ರೋತ್ಸಾಹಿಸುತ್ತಾ ಅವಲಂಬನ ಉತ್ತಮ ಕಾರ್ಯವೆಸಗುತ್ತಿದೆ, ಬೆಂಗಳೂರು ಸೀಮಾಪರಿಷತ್ತಿನ ಬೆಂಬಲ ಮತ್ತು ಸಹಕಾರ ಎಂದೆಂದಿಗೂ ಇದೆ ಎಂದರು.

ಶ್ರೀಗಳು ತಮ್ಮ ಆಶೀರ್ವಚನದಲ್ಲಿ, ಭೋಗಿಸುತ್ತಾ ಹೋದಂತೆ ಪುಣ್ಯ ಕ್ಷಯಿಸುತ್ತದೆ. ತ್ಯಾಗ ಮಾಡುತ್ತಾ ಹೋದಂತೆ ಪುಣ್ಯ ವೃದ್ದಿಸುತ್ತದೆ. ಮನುಷ್ಯ ತನ್ನ ಜೀವಿತದಲ್ಲಿ ಭೋಗಿಸಿದ್ದಕ್ಕಿಂತ ಹೆಚ್ಚು ತ್ಯಾಗ ಮಾಡಿದರೆ ಅದು ಉತ್ತಮ ಜೀವನವೆನಿಸುತ್ತದೆ. ನಮ್ಮ ಆಯಸ್ಸು ಪೂರ್ವ ನಿದದಿತವಾದುದ್ದರಿಂದ ಪ್ರತಿಕ್ಷಣವೂ ಅತ್ಯಮೂಲ್ಯ, ಹೀಗಾಗಿ ಸಿಗುವ ಪ್ರತಿನಿಮಿಷವನ್ನೂ ಭೋಗಕ್ಕಿಂತ ತ್ಯಾಗಕ್ಕೆ ವ್ಯಯಿಸುವುಲ್ಲಿ ಸದಾ ನಾವು ಚಿಂತಿಸಬೇಕಿದೆ ಎಂದರು. ಉತ್ಸಾಹಿ ಯುವ ಕಾರ್ಯಕರ್ತರಿಗೆ ತಾವು ನೀದಿದ ಒಂದು ಸಣ್ಣ ಸೂಚನೆ ಇಂದು ಅವಲಂಬನವಾಗಿ ಹೊರಹೊಮ್ಮಿದೆ. ಅವಲಂಬನದ ಬೆಳವಣಿಗೆ ತಮಗೆ ಅತೀವ ಸಂತಸ ತಂದಿದೆ ಎಂದು ನುಡಿಯುತ್ತಾ, ತಮ್ಮ ಆಶೀರ್ವಾದ ಅವಲಂಬನ ತಂಡಕ್ಕೆ ಸದಾ ಇರುವುದೆಂದರು.

ಶಿಬಿರದಲ್ಲಿ ೪೦ ಕ್ಕೂ ಹೆಚ್ಚು ರಕ್ತದಾನಿಗಳು ಭಾಗವಹಿಸಿ ಅವಲಂಬನ್ದ ಈ ಕಾರ್ಯಕ್ರಮವನ್ನು ಯಶಸ್ವೀಗೊಳಿಸಿದರು