ವಾರ್ತೆ
ವಾರ್ತೆಯ ಮುಖಪುಟ
ಜನವರಿ 11, 2009
 

ಅವಲಂಬನ ಸಂಸ್ಥೆಯ "ಅಕ್ಷರ" ವಿಭಾಗದಿಂದ "ಭವಿಷ್ಯ" ಎಂಬ ಕಾರ್ಯಾಗಾರವನ್ನು ಹತ್ತನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಹಾಗೂ ಅವರ ಪೋಷಕರಿಗಾಗಿ ಸಾಗರ ತಾಲ್ಲೂಕಿನ ಭೀಮನಕೋಣೆಯ ಲಕ್ಶ್ಮೀನಾರಾಯಣ ದೇವಸ್ಥಾನದಲ್ಲಿ ಕಳೆದ ಜನವರಿ 11ರಂದು ಭಾನುವಾರ ಏರ್ಪಡಿಸಿತ್ತು. ಕಾರ್ಯಕ್ರಮ ಬೆಳಿಗ್ಗೆ 9:00 ರಿಂದ ಸಂಜೆ 6:00 ರವರೆಗೆ ನೆಡೆಯಿತು. ಕಾರ್ಯಕ್ರಮದಲ್ಲಿ ಸಾಗರ ಪ್ರಾಂತ್ಯದ ಸುಮಾರು 120 ವಿದ್ಯಾರ್ಥಿಗಳು, ಅವರ ಪೋಷಕರು ಹಾಗೂ ಶಿಕ್ಷಕರು ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ಸಾಂಪ್ರದಾಯಿಕವಾಗಿ ದೀಪ ಬೆಳಗಿಸುವುದರೊಂದಿಗೆ ಸಾಗರ ಪ್ರಾಂತ್ಯ ಪರಿಷತ್ ಅಧ್ಯಕ್ಷರಾದ ಶ್ರೀಯುತ ಶಿವರಾಮಯ್ಯನವರು ಉದ್ಘಾಟಿಸಿದರು. ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಬಂದ  ಶ್ರೀ ಬಿ.ಆರ್. ಪ್ರಸಾದ್ ಅವರು ಈಗಿನ ಸ್ಪರ್ದಾತ್ಮಕ ಯುಗದಲ್ಲಿ "ಮಕ್ಕಳ ಹಾಗೂ ಪೋಷಕರ ಸಂಬಂದ" ದ ಕುರಿತು ಪೋಷಕರಿಗೆ ತಿಳುವಳಿಕೆ ನೀಡಿದರು. ಕಾರ್ಯಕ್ರಮದಲ್ಲಿ ಮಕ್ಕಳ ಆಸಕ್ತಿ ತಿಳಿಯುವ ಮನೋವೈಜ್ಞಾನಿಕ ಪರೀಕ್ಷೆಯೊಂದನ್ನು ಏರ್ಪಡಿಸಲಾಗಿತ್ತು. ನಂತರ ಮಕ್ಕಳು ಹಾಗೂ ಪೊಷಕರ ಜೊತೆ ಬಿ.ಆರ್. ಪ್ರಸಾದ್ ಅವರು ಸಂವಾದ ಹಾಗೂ ಪ್ರಶ್ನೋತ್ತರ ವನ್ನು ನೆಡೆಸಿದರು. ಮಕ್ಕಳು ಯಾರದೋ ಒತ್ತಡಕ್ಕಾಗಲೀ, ಅನುಕರಣೆಗಾಗಲೀ ಪ್ರೇರಿತರಾಗದೇ ತಮ್ಮ ಆಸಕ್ತಿಯ ಕ್ಸೇತ್ರದಲ್ಲೇ ಮುಂದುವರಿಯಬೇಕೆಂದು ತಿಳಿಸಿದರು

ಮದ್ಯಾಹ್ನದ ಕಾರ್ಯಕ್ರಮದಲ್ಲಿ ಎಸ್,ಎಸ್,ಎಲ್,ಸಿ ಯ ನಂತರ ಇರುವ ವಿವಿಧ ಶೈಕ್ಷಣಿಕ ಅವಕಾಶಗಳ ಕುರಿತು ಆಯಾ ವಿಭಾಗದ ವಿಷಯ ತಜ್ನರು ಮಾತನಾದಿದರು. ವಾಣಿಜ್ಯ ಮತ್ತು ಕಲಾ ವಿಷಯಗಳ ಬಗ್ಗೆ ಪ್ರೊ.ಗೋಪಾಲ್, ಭಾರತೀಯ ಸೇನೆ ಹಾಗೂ ವಿದ್ಯಾರ್ಥಿವೇತನದ ಬಗ್ಗೆ ಶ್ರೀ ಶ್ರೀಪ್ರಕಾಶ್ ಕುಕ್ಕಿಲ, ಆಡಳಿತ ಸೇವೆಗಳ ಕುರಿತು ಶ್ರೀ ಗಣಪತಿ ಕಟ್ಟಿನಕೆರೆ, ಮೂಲಭೂತ ವಿಜ್ನಾನದ ಕುರಿತು ಡಾ. ಜಿ.ಎಸ್. ಭಟ್ ಹಾಗೂ ಮಾಹಿತಿ ತಂತ್ರಜ್ನಾನದ ಕುರಿತು ಡಾ.ಪವನಜ ಅವರು ಮಾತನಾಡಿದರು.

ಸಮಾರೋಪ ಸಮಾರಂಭದಲ್ಲಿ ಶಿಭಿರಾರ್ಥಿಗಳು ಹಾಗೂ ಪೋಷಕರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಈ ಕಾರ್ಯಾಗಾರದಿಂದ ತಮಗೆ ಉತ್ತಮ ಮಾಹಿತಿ ಲಭಿಸಿದೆಯೆಂದು ವಿದ್ಯಾರ್ಥಿಗಳು ಅಭಿಪ್ರಾಯಪಟ್ಟರು. ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಸಾಗರ ಪ್ರಾಂತ್ಯಪರಿಷತ್ ಸಂಘಟನಾ ಕಾರ್ಯದರ್ಶಿ ಶ್ರೀ ಗುರುಪ್ರಸಾದ್ ಭೀಮನಕೋಣೆ ಯವರು ಇಂಥ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಉಪಯುಕ್ತ ಎಂದೂ ಆಧ್ಯಕ್ಷತೆ ವಹಿಸಿದ್ದ ಶ್ರೀ ಶಿವರಾಮಯ್ಯ ನವರು ಇಂಥಾ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನೆಡೆಯುವಂತಾಗಲಿ ಎಂದು ಅವಲಂಬನ ತಂಡವನ್ನು ಹರಸಿದರು.