ವಾರ್ತೆ
ವಾರ್ತೆಯ ಮುಖಪುಟ
17 ಮೇ, 2009

"ಕಂಪ್ಯೂಟರ್ ನಲ್ಲಿ ಕನ್ನಡ ಬಳಕೆ" ಎಂಬ ಕಾರ್ಯಾಗಾರದ ವಿವರ

ಅವಲಂಬನದ ಅಕ್ಷರ ವಿಭಾಗ "ಕಂಪ್ಯೂಟರ್ ನಲ್ಲಿ ಕನ್ನಡ ಬಳಕೆ" ಎಂಬ ಕಾರ್ಯಾಗಾರವನ್ನು ಬೆಂಗಳೂರಿನ ಗಿರಿನಗರದ ರಾಮಾಶ್ರಮದಲ್ಲಿ ಕಳೆದ ಭಾನುವಾರ ಮೇ ೧೭ ೨೦೦೯ ರಂದು ಏರ್ಪಡಿಸಿತ್ತು. ಕಾರ್ಯಕ್ರಮ ಮಧ್ಯಾಹ್ನ ೨.೩೦ ರಿಂದ ೪.೩೦ರ ವರೆಗೆ ನಡೆಯಿತು.

ಕಾರ್ಯಕ್ರಮದಲ್ಲಿ ಡಾ|| ಯು. ಬಿ. ಪವನಜ ಅವರು ಕನ್ನಡದ ವಿವಿಧ ತಂತ್ರಾಂಶಗಳ ಬಗ್ಗೆ ಮಾಹಿತಿ ಹಾಗೂ ಅವುಗಳ ಬಳಕೆಯ ಬಗ್ಗೆ ವಿವರವಾಗಿ ಪ್ರಾತ್ಯಕ್ಷಿಕೆ ಸಮೇತ ವಿವರಿಸಿದರು. ಸತ್ಯಶಂಕರ್ ಅವರು ಗ್ರಾಫಿಕ್ಸ್ ತಂತ್ರಾಂಶಗಲ್ಲಿ ಕನ್ನಡದ ಬಳಕೆಯ ಬಗ್ಗೆ ವಿವರಿಸಿದರು.

ಕಾರ್ಯಕ್ರಮದಲ್ಲಿ ೫೦ ಕ್ಕೂ ಹೆಚ್ಚಿನ ಜನ ಭಾಗವಹಿಸಿ ಪ್ರಯೋಜನ ಪಡೆದರು.