ವಾರ್ತೆ
ವಾರ್ತೆಯ ಮುಖಪುಟ
ಜುಲೈ 19, 2009
 

ರಾಮಚಂದ್ರಾಪುರಮಠದಲ್ಲಿ ನಡೆದ ಮೊದಲ ತಿಂಗಳ ಬೆಳಕು ಕಾರ್ಯಕ್ರಮ ಯಶಸ್ವಿಯಾಯಿತೆಂದು ತಿಳಿಸಲು ಹರ್ಷಿಸುತ್ತೇವೆ.

ಜಡಿ ಮಳೆಯ ಕಾರಣ  ಆಯ್ಕೆಯಾದ 51 ವಿದ್ಯಾರ್ಥಿಗಳಲ್ಲಿ 26 ವಿದ್ಯಾರ್ಥಿಗಳು, 24 ಜನ ಪೋಷಕರು ಮಾತ್ರ ಭಾಗವಹಿಸಿದರು.

ಕಾರ್ಯಕ್ರಮವನ್ನು ಸಂಪನ್ಮೂಲ ವ್ಯಕ್ತಿ ಬಿ.ಆರ್. ಪ್ರಸಾದ್ ಉದ್ಘಾಟಿಸಿದರು. ನಂತರ ಮಾತನಾಡಿದ ವಿದ್ವಾನ್ ಜಗದೀಶ ಶರ್ಮಾ ಭಾರತೀಯ ಸಂಸ್ಕೃತಿಯ  ಹಿನ್ನೆಲೆಯಲ್ಲಿ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಅಂಶಗಳನ್ನು  ಶಿಬಿರಾರ್ಥಿಗಳಿಗೆ ತಿಳಿಯಪಡಿಸಿದರು.


ಕಾರ್ಯಕ್ರಮ ಚಿತ್ರಗಳು
   

ಎರೆಡನೇ ಗೋಶ್ಟಿಯನ್ನು ನಡೆಸಿಕೊಟ್ಟ ಬಿ.ಆರ್.ಪ್ರಸಾದ್ ಪೋಷಕರ ಮತ್ತು ಮಕ್ಕಳ ನಡುವಿನ ಆರೋಗ್ಯಕರ ಸಂಬಂದವನ್ನು ಬೆಳುಸುವುದರ ಕುರಿತಾಗಿ ಮಾತನಾಡಿದರು. ಆದರ್ಶ ಎಮ್.ಆರ್. ವಿದ್ಯಾರ್ಥಿಗಳಿಗೆ spoken english ತರಭೇತಿ ನೀಡಿದರು.

ಕೊನೆಯಲ್ಲಿ ನಡೆದ ಸಂವಾದದಲ್ಲಿ ಶಿಬಿರಾರ್ಥಿಗಳನ್ನು ತಿಂಗಳ ಬೆಳಕು ಕಾರ್ಯಕ್ರಮದಿಂದ ಅವರೇನು ಬಯಸುತ್ತಾರೆ ಎಂಬ ಕುರಿತಾಗಿ ಪ್ರಶ್ನಿಸಲಾಯಿತು.

ಸಾಗರ್ ಅಥವಾ ಹತ್ತಿರದ ಊರುಗಳಲ್ಲಿ ಕಾರ್ಯಕ್ರಮ ನಡೆಸಿದರೆ ಹೋಗಿಬರಲು ಅನೂಕೂಲ ಎಂಬುದು ಕುರಿತಾಗಿ ಹೆಚ್ಚಿನ ಪೋಷಕರ ಅಭಿಪ್ರಾಯ.

ಬಿ.ಆರ್. ಪ್ರಸಾದ್ ಅವರಿಗೆ ನೆನಪಿನ ಕಾಣಿಕೆ ಕೊಟ್ಟು ಗೌರವಿಸಲಾಯಿತು.

ಶಿಬಿರಾರ್ಥಿಗಳಿಗಾಗಿ ’ವಿದ್ಯಾರ್ಥಿಗಳಿಗಾಗಿ’ ಎಂಬ ಪುಸ್ತಕ, ತಿಂಗಳ ಬೆಳಕು ಕಾರ್ಯಕ್ರಮಕ್ಕಗಿ ವಿಶೇಶವಾಗಿ ಮುದ್ರಿಸಲ್ಪಟ್ಟ ನೋಟ್ ಪುಸ್ತಕ, ಅಲ್ಲದೇ ಇದರೊಟ್ಟಿಗೆ ಒಂದು ೨೦೦ ಪುಟಗಳ ನೋಟ್ ಪುಸ್ತಕವನ್ನೂ ಉಚಿತವಾಗಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ಬೆಂಗಳೂರು ಅವಲಂಬನದಿಂದ ಮಧು ದೊಡ್ಡೇರಿ, ವೇಣು ವಿಘ್ನೇಶ, ಗಣೇಶ್ ಪ್ರಸಾದ್ ಹೆಗಡೆ, ನಾಗರಾಜ್ ಭಟ್ ದಾಂಡೇಲಿ ಭಾಗವಹಿಸಿದ್ದರು. ಸಾಗರ ಘಟಕದ ಪ್ರತಿನಿಧಿಯಾಗಿ ಶ್ರೀನಂದನ್ ರಾವ್ , ಕುಗ್ವೆ ಭಾಗವಹಿಸಿದರು.

ಕಾರ್ಯಕ್ರಮದ ಯಶಸ್ಸಿಗೆ ಅಕ್ಷರ ವಿಭಾಗ ಎಲ್ಲ ಅವಲಂಬನ ಕಾರ್ಯಕರ್ತರನ್ನೂ ಅಭಿನಂದಿಸುತ್ತಲ್ಲದೇ, ಮುಂಬರುವ ತಿಂಗಳ ಬೆಳಕು ಕಾರ್ಯಕ್ರಮಗಳಿಗೆ ಸಂಪೂರ್ಣ ಸಹಕಾರ ಬಯಸುತ್ತದೆ.