ವಾರ್ತೆ
ವಾರ್ತೆಯ ಮುಖಪುಟ
ಡಿಸೆಂಬರ್ 28, 2008
 

ಪುತ್ತೂರಿನಲ್ಲಿ 28 ಡಿಸೆಂಬರ್ ರಂದು ನಡೆದ ಭವಿಷ್ಯ ಕಾರ್ಯಕ್ರಮ  ಯಶಸ್ವಿಯಾಯಿತು. 35ಕ್ಕೂ ಹೆಚ್ಚಿನ ಮಕ್ಕಳು, 50 ಜನ ಪೋಷಕರು ಭಾಗವಹಿಸಿದರು. ಮಕ್ಕಳಿಗೆ ’Courses and Careers after SSLC’ ಮತ್ತು ’SSLC  ಪ್ರಶ್ನೆಪತ್ರಿಕೆಗಳ ಸಂಗ್ರಹ’ ಎಂಬ ಎರೆಡು ಪುಸ್ತಕಗಳನ್ನು ಕಾರ್ಯಗಾರದಲ್ಲಿ ಉಚಿತವಾಗಿ ಮಕ್ಕಳಿಗೆ ಹಂಚಲಾಯಿತು.

ಮಾಣಿ ಮಠದ ಅಧ್ಯಕ್ಷ ಹಾರಕೆರೆ ನಾರಯಣ ಭಟ್ಟರು ಹಾಗೂ ಪ್ರಾಂತ್ಯ ಪರಿಷತ್ ಅಧ್ಯಕ್ಷ ಪಡಿಲು ಮಹಾಭಲಭಟ್ಟರು  ಕಾರ್ಯಕ್ರಮದುದ್ದಕ್ಕೂ ಜೊತೆಗಿದ್ದು ಸಹಕರಿಸಿ ಪ್ರೋತ್ಸಾಹಿಸಿದರು.

ಬೆಂಗಳೂರಿನಿಂದ 15 ಕ್ಕೂ ಹೆಚ್ಚಿನ ಸಂಖ್ಯೆಯ ಅವಲಂಬನ ಕಾರ್ಯಕರ್ತರು ತೆರಳಿದ್ದರು. ಪ್ರತೀವರ್ಷವೂ ಪ್ರತೀಸೀಮೆಯಲ್ಲೂ ಈ ಕಾರ್ಯಕ್ರಮ ನಡೆಯಬೇಕೆಂದು ಶಿಬಿರಾರ್ಥಿಗಳು, ಪರಿಷತ್ ಪದಾಧಿಕಾರಿಗಳು ಒಕ್ಕೊರಲಿನಿಂದ ಒತ್ತಾಯಿಸುವಷ್ಟು ಪ್ರಭಾವ, ಜನಾಭಿಪ್ರಾಯ ಮೂಡಿಸುವಷ್ಟರ ಮಟ್ಟಿನ ಯಶಸ್ಸನ್ನು, ಅವಲಂಬನ ತನ್ನ ಈ ಮೊದಲ ಗ್ರಾಮೀಣ ಕಾರ್ಯಕ್ರಮದಲ್ಲಿ ಪಡೆಯಿತು.