ವಸತಿ ವಿಭಾಗ

ವಿದ್ಯಾರ್ಜನೆ ಮತ್ತು ಉದ್ಯೋಗವನ್ನರಸಿ ಪಟ್ಟಣಗಳಿಗೆ ಬರುವ ಹವ್ಯಕರಿಗೆ ಉಂಟಾಗುವ ಪ್ರಮುಖ ಸಮಸ್ಯೆ ವಸತಿ. ಒಂದು ವ್ಯಕ್ತಿ ಉತ್ತಮ ಸಂಸ್ಕಾರವಂತನಾಗಬೇಕಾದರೆ ಆತನ ಪರಿಸರ ಅಷ್ಟೇ ಸ್ವಚ್ಚವಾಗಿರಬೇಕು. ಉತ್ತಮರ ಸಹವಾಸವಿರಬೇಕು. ಅದರಲ್ಲೂ ಬೆಳೆಯುವ ಸಿರಿಗೆ ಉತ್ತಮ ಸಂಸ್ಕಾರ ಸಿಕ್ಕರೆ ಸಮಾಜದ ಏಳ್ಗೆ ಶೀಘ್ರ. ಪಟ್ಟಣಗಳಿಗೆ ಬರುವ ಹವ್ಯಕರಿಗೆ ಉತ್ತಮ ಮೂಲಭೂತ ಸೌಲಬ್ಯಗಳನ್ನೊಳಗೊಂಡ ವಸತಿ ಗೃಹಗಳನ್ನು ಒದಗಿಸುವ ಜವಾಬ್ದಾರಿಯನ್ನು “ವಸತಿ” ವಿಭಾಗ ವಹಿಸಿಕೊಂಡಿದೆ.

ಈಗಾಗಲೇ ಬಹಳಷ್ಟು ಹವ್ಯಕರು ಇದರ ಪ್ರಯೋಜನವನ್ನು ಪಡೆದಿದ್ದಾರೆ. ಸದ್ಯದಲ್ಲಿ ಬೆಂಗಳೂರಿನಲ್ಲಿ ಇರುವ ಪುರುಷ ಮತ್ತು ಮಹಿಳಾ ವಸತಿ ಗೃಹಗಳ ಮಾಹಿತಿ ವಸತಿ ವಿಭಾಗದಲ್ಲಿ ಲಭ್ಯವಿದೆ. ಮುಂದಿನ ದಿನಗಳಲ್ಲಿ ವಸತಿ ವಿಭಾಗವು ಉಳಿದ ಪ್ರಮುಖ ಪಟ್ಟಣಗಳ ವಸತಿ ಗೃಹಗಳ ಮಾಹಿತಿಯನ್ನು ನೀಡಲಿದೆ.